ಬ್ಲೂಬೆರ್ರಿ ಬಾಬ್ಕಾ

ಬ್ಲೂಬೆರ್ರಿ ಫಿಲ್ಲಿಂಗ್
- ಬ್ಲೂಬೆರ್ರಿತೂಕ:5.6 ಔನ್ಸ್ಪ್ರಮಾಣ:1 ಕಪ್
- ಸಕ್ಕರೆತೂಕ:2.8 ಔನ್ಸ್ಪ್ರಮಾಣ:1/2 ಕಪ್
- ಕಾರ್ನ್ಫ್ಲೋರ್ತೂಕ:0.3 ಔನ್ಸ್ಪ್ರಮಾಣ:1 ದೊಡ್ಡ ಚಮಚ
- ನೀರುತೂಕ:0.7 ಔನ್ಸ್ಪ್ರಮಾಣ:1 1/2 ದೊಡ್ಡ ಚಮಚಗಳು
ತಯಾರಿಸುವ ವಿಧಾನ
ಬ್ಲೂಬೆರ್ರಿ ಫಿಲ್ಲಿಂಗ್
ಒಂದು ಪಾತ್ರೆಯಲ್ಲಿ 160 g ಬ್ಲೂಬೆರ್ರಿ, 80 g ಸಕ್ಕರೆ, 1 tbsp ಕಾರ್ನ್‌ಫ್ಲೋರ್ ಮತ್ತು 20 g ನೀರನ್ನು ಸೇರಿಸಿ. ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬೇಯಿಸಿ. ಕುದಿ ಬಂದ ನಂತರ 5 ನಿಮಿಷಗಳ ಕಾಲ ಗಟ್ಟಿಯಾಗುವವರೆಗೆ ಬೇಯಿಸಿ, ನಂತರ ಪೂರ್ತಿಯಾಗಿ ತಣ್ಣಗಾಗಲು ಬಿಡಿ.
ಹಿಟ್ಟಿಗೆ
- ಮೈದಾ ಅಥವಾ ಗೋಧಿ ಹಿಟ್ಟುತೂಕ:8.8 ಔನ್ಸ್ಪ್ರಮಾಣ:2 ಕಪ್‌ಗಳು
- ಡ್ರೈ ಈಸ್ಟ್ತೂಕ:0.2 ಔನ್ಸ್ಪ್ರಮಾಣ:1 2/3 ಚಿಕ್ಕ ಚಮಚಗಳು
- ಸಕ್ಕರೆತೂಕ:1.8 ಔನ್ಸ್ಪ್ರಮಾಣ:1/4 ಕಪ್
- ಉಪ್ಪುತೂಕ:0.1 ಔನ್ಸ್ಪ್ರಮಾಣ:1/4 ಚಿಕ್ಕ ಚಮಚಗಳು
- ಉಗುರುಬೆಚ್ಚಗಿನ ಹಾಲುತೂಕ:5.3 ಔನ್ಸ್ಪ್ರಮಾಣ:2/3 ಕಪ್
- ಬೆಣ್ಣೆ (ಸಾಫ್ಟ್ ಆಗಿರಲಿ)ತೂಕ:1.8 ಔನ್ಸ್ಪ್ರಮಾಣ:1/4 ಕಪ್
- ಬಾದಾಮಿ ಚೂರುಗಳು (ಬೇಕಿದ್ದರೆ)ತೂಕ:0.0 ಔನ್ಸ್ಪ್ರಮಾಣ:ಐಚ್ಛಿಕ
ತಯಾರಿಸುವ ವಿಧಾನ
ಹಿಟ್ಟು ಕಲಸುವುದು
ಒಂದು ಅಗಲವಾದ ಪಾತ್ರೆಯಲ್ಲಿ 250 g ಹಿಟ್ಟು, 1½ tsp ಡ್ರೈ ಈಸ್ಟ್, 50 g ಸಕ್ಕರೆ ಮತ್ತು ¼ tsp ಉಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ 30°C (86°F) ತಾಪಮಾನದ 150 g ಉಗುರುಬೆಚ್ಚಗಿನ ಹಾಲು ಮತ್ತು 50 g ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ. ಕ್ಲಿಂಗ್ ಫಿಲ್ಮ್‌ನಿಂದ ಮುಚ್ಚಿ ಬೆಚ್ಚಗಿನ ಜಾಗದಲ್ಲಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ.
ನಂತರ ಹಿಟ್ಟನ್ನು 7–10 ನಿಮಿಷಗಳ ಕಾಲ ನಾದಿ, ಮೃದು ಹಾಗೂ ಎಲಾಸ್ಟಿಕ್ ಹದಕ್ಕೆ ತನ್ನಿ. ಸ್ವಲ್ಪ ಎಣ್ಣೆ ಸವರಿದ ಪಾತ್ರೆಗೆ ಹಿಟ್ಟನ್ನಿಟ್ಟು, ಕ್ಲಿಂಗ್ ಫಿಲ್ಮ್ ಮುಚ್ಚಿ ಹಿಟ್ಟು ದುಪ್ಪಟ್ಟಾಗುವವರೆಗೆ 1½–2 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿಡಿ.
ಬಾಬ್ಕಾ ಆಕಾರ ನೀಡುವುದು
ಉಬ್ಬಿದ ಹಿಟ್ಟನ್ನು ಆಯತಾಕಾರದಲ್ಲಿ (rectangle) ಲಟ್ಟಿಸಿ. ತಣ್ಣಗಾದ ಬ್ಲೂಬೆರ್ರಿ ಫಿಲ್ಲಿಂಗ್ ಅನ್ನು ಅಂಚುಗಳನ್ನು ಬಿಟ್ಟು ಸಮವಾಗಿ ಹರಡಿ. ನಂತರ ಅದನ್ನು ರೋಲ್ ಮಾಡಿ, ಅಂಚುಗಳನ್ನು ಸರಿಯಾಗಿ ಲಾಕ್ ಮಾಡಿ.
ಈ ರೋಲ್ ಅನ್ನು ಉದ್ದವಾಗಿ ಎರಡು ಭಾಗಗಳಾಗಿ ಕತ್ತರಿಸಿ. ಕತ್ತರಿಸಿದ ಭಾಗ ಮೇಲಿರುವಂತೆ ಒಂದಕ್ಕೊಂದು ಹೆಣೆದು ಜಡೆಯಾಕಾರ ತನ್ನಿ. ತುಪ್ಪ ಅಥವಾ ಬೆಣ್ಣೆ ಸವರಿದ ಬೇಕಿಂಗ್ ಪ್ಯಾನ್‌ನಲ್ಲಿ ಇಟ್ಟು, ಕ್ಲಿಂಗ್ ಫಿಲ್ಮ್ ಮುಚ್ಚಿ ಮತ್ತೆ 30–40 ನಿಮಿಷಗಳ ಕಾಲ ಉಬ್ಬಲು ಬಿಡಿ.
ಬೇಕಿಂಗ್
ಇಷ್ಟವಿದ್ದರೆ ಮೇಲೆ ಬಾದಾಮಿ ಚೂರುಗಳನ್ನು ಉದುರಿಸಿ. ಮುಂಚಿತವಾಗಿ ಕಾಯಿಸಿದ ಓವನ್‌ನಲ್ಲಿ 180°C (350°F) ತಾಪಮಾನದಲ್ಲಿ 25–30 ನಿಮಿಷಗಳ ಕಾಲ ಮೇಲ್ಭಾಗ ಹೊಂಬಣ್ಣಕ್ಕೆ ಬರುವವರೆಗೆ ಬೇಕ್ ಮಾಡಿ. ನಂತರ ಪ್ಯಾನ್‌ನಲ್ಲೇ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ತಣ್ಣಗಾದ ಮೇಲೆ ನಿಧಾನವಾಗಿ ಹೊರತೆಗೆದು, ಸ್ಲೈಸ್ ಮಾಡಿ ಸವಿಯಿರಿ! 🫐
ಅಲರ್ಜಿನ್‌ಗಳು
- ಗ್ಲುಟನ್
- ಹಾಲು
- ನಟ್ಸ್ (ಬಾದಾಮಿ, ವಾಲ್‌ನಟ್ ಇತ್ಯಾದಿ)
ಪದಾರ್ಥಗಳ ಸಂಯೋಜನೆಯಿಂದ ಲೆಕ್ಕಹಾಕಲಾಗಿದೆ. ಪ್ಯಾಕೇಜಿಂಗ್ ಅನ್ನು ಪರಿಶೀಲಿಸಿ: ತಯಾರಕರು ಅಲರ್ಜಿನ್‌ಗಳನ್ನು ಸೇರಿಸಿರಬಹುದು ಮತ್ತು ಉತ್ಪನ್ನಗಳು ಅವುಗಳ ಕುರುಹುಗಳನ್ನು ಹೊಂದಿರಬಹುದು.
ಒಟ್ಟು ಅಳತೆಗಳು
ವೆಬ್ಸೈಟ್ಗೆ ಹೋಗಿ
ವೀಡಿಯೊ ವೀಕ್ಷಿಸಿ